ಮನದ ಮಾತು

ಅಧ್ಯಾಯ ೧ · ೨೦೧೨

'ಸಾಧನೆ' ಪುಸ್ತಕ ಬಿಡುಗಡೆ

೨೭ ಡಿಸೆಂಬರ್ ೨೦೧೨ · ೧ ನಿಮಿಷ ಓದು · ಬರಹ ೪೨ / ೨೨೩

❦

     'ಸಾಧನೆ' ಇದು ನನ್ನ ಮೊದಲ ಕೃತಿ. ಇದುವರೆಗೆ ನೂರಕ್ಕೂ ಹೆಚ್ಚು ಲೇಖನಗಳನ್ನು ಮತ್ತು ಒಂದೆರಡು ಕಥೆಗಳನ್ನು ಬರೆದಿರುವೆನಾದರೂ ಪುಸ್ತಕ ರೂಪದಲ್ಲಿ ಪ್ರಕಟವಾದ ಮೊದಲ ಕೃತಿ ಇದು. ನನ್ನ ಎರಡನೇ ಕೃತಿ 'ಪೂರ್ಣ ಸತ್ಯ' ಅಚ್ಚಿನಲ್ಲಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಪ್ರಕಟವಾಗಿ ಹೊರಬರಲಿದೆ. ಈ ಸಂದರ್ಭ ನನ್ನ ಮೊದಲ ಪುಸ್ತಕ 'ಸಾಧನೆ'ಯನ್ನು ಪ್ರಕಟಿಸಿದ ಬಾಗಲಕೋಟೆಯ ಬಿ.ವಿ.ವಿ.ಸಂಘದ ವೈರಾಗ್ಯದ ಮಲ್ಲಣಾರ್ಯ ಪ್ರಕಾಶನ ಸಂಸ್ಥೆಗೂ ಮತ್ತು 'ಪೂರ್ಣ ಸತ್ಯ' ಕೃತಿಯನ್ನು ಪ್ರಕಟಿಸುತ್ತಿರುವ ಗುಲಬರ್ಗಾದ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಗೂ ನನ್ನ ಕೃತಜ್ಞತೆಗಳು.
'ಸಾಧನೆ' ಪುಸ್ತಕ ಬಿಡುಗಡೆ ಸಂದರ್ಭದಲ್ಲಿನ ಕೆಲವು ಚಿತ್ರಗಳು.

❦

— ಮುಗಿಯಿತು —

ನಿಮ್ಮ ಅನಿಸಿಕೆ